ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮುರ್ಡೇಶ್ವರ: ನ್ಯಾಶನಲ್ ಹೈಸ್ಕೂಲ್ ಆವರಣದಲ್ಲಿ ಯಶಸ್ವೀ ವೈದ್ಯಕೀಯ ಶಿಬಿರ

ಮುರ್ಡೇಶ್ವರ: ನ್ಯಾಶನಲ್ ಹೈಸ್ಕೂಲ್ ಆವರಣದಲ್ಲಿ ಯಶಸ್ವೀ ವೈದ್ಯಕೀಯ ಶಿಬಿರ

Mon, 01 Feb 2010 02:58:00  Office Staff   S.O. News Service

ಮುರ್ಡೇಶ್ವರ, ಜನವರಿ 31: ಭಾನುವಾರ ಬೆಳಿಗ್ಗೆ ಹತ್ತರಿಂದ ಸಂಜೆ ಆರರವರೆಗೆ ಮುಸ್ಲಿಂ ಎಜುಕೇಶನ್ ಸೊಸೈಟಿ (ಎಂ.ಇ.ಎಸ್) ಆಯೋಜಿಸಿದ್ದ ಉಚಿತ ವೈದ್ಯಕೀಯ ಶಿಬಿರದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ ಶಿಬಿರದ ಲಾಭ ಪಡೆದುಕೊಂಡರು.

 

 

31-mur2.jpg 

 

ಈ ಶಿಬಿರದಲ್ಲಿ ಬೆಂಗಳೂರು ಹಾಗೂ ಮಂಗಳೂರಿನ ಹಲವು ಖ್ಯಾತ ತಜ್ಞ ವೈದ್ಯರು ಆಗಮಿಸಿ ರೋಗಿಗಳಿಗೆ ಸಾಮಾನ್ಯ ತಪಾಸಣೆಯ ಜೊತೆಗೆ ಕಣ್ಣು, ಹಲ್ಲು, ಕೀಲು, ಎಲುಬುಗಳಿಗೆ ವಿಶೇಷ ಚಿಕಿತ್ಸೆ ಹಾಗೂ ಸಲಹೆ ನೀಡಲಾಯಿತು. ಮಹಿಳೆಯರ ಮತ್ತು ಮಕ್ಕಳ ತಜ್ಞರೂ ಹಾಜರಿದ್ದು ರೋಗಿಗಳಿಗೆ ಚಿಕಿತ್ಸೆ ಹಾಗೂ ಸಲಹೆ ನೀಡಿದರು.

 

 

ಶಿಬಿರದಲ್ಲಿ ಡಾ. ದೀಪಕ್ ರೈ, ಡಾ. ಹರಿಪ್ರಸಾದ್ ಕಿಣಿ, ಡಾ. ವಿಷ್ಣುಪ್ರಭು, ಡಾ. ನಯನ ಪ್ರಭು, ಡಾ. ಸೌಮ್ಯ, ಡಾ. ಶ್ವೇತಾ ಭಟ್, ಡಾ.ಉಸ್ಮಾನ್, ಡಾ. ಹಾಶಿಮ್ ಶಿಂಗಟಿ, ಡಾ. ಯೂನುಸ್, ಡಾ. ಉಸ್ಮಾ ಕೌಸರ್, ಡಾ. ರಾಘವ್ ಭಟ್, ಡಾ. ಅಮೀನುದ್ದೀನ್ ಗೌಡಾ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು.

 

 


Share: